ಬೆಂಗಳೂರು: ಬಿಡಿಎ ಕಚೇರಿ ಮೇಲೆ ಎಸಿಬಿ ರೇಡ್ ಮಾಡಲಾಗಿದ್ದು, ರೇಡ್ ವೇಳೆ, ಬಿಡಿವೆ ಬ್ರೋಕರ್ಗಳ ಕೋಟಿಕೋಟಿ ಡೀಲ್ ಬಯಲಾಗಿದೆ. ACB ರೇಡ್ನಲ್ಲಿ ಬಣ್ಣ ಬಯಲಾಗುತ್ತಿದ್ದಂತೆ ಬ್ರೋಕರ್ಗಳು ಪರಾರಿಯಾಗಿದ್ದಾರೆ.
ಆರ್.ಟಿ.ನಗರದ ಬ್ರೋಕರ್ಗಳ ಕಿಂಗ್ಪಿನ್ 100 ಕೋಟಿಗೂ ಹೆಚ್ಚು ಗಳಿಸಿದ್ದು, ಎಸಿಬಿ ರೇಡ್ ಆಗುತ್ತಿದ್ದಂರೆ ಎಸ್ಕೇಪ್ ಆಗಿದ್ದಾನೆ. ಮಂಗಳೂರು ಕಡೆಗೆ ಆರ್.ಟಿ.ನಗರ ಬ್ರೋಕರ್ ಪರಾರಿಯಾಗಿರೋ ಮಾಹಿತಿ ಇದ್ದು, ಕುಖ್ಯಾತ ಬ್ರೋಕರ್ ಬಗ್ಗೆ ಮಹತ್ವದ ದಾಖಲೆ ಪತ್ತೆಯಾಗಿದೆ. ಇತ್ತೀಚೆಗೆ ಈ ಕುಖ್ಯಾತ ಬ್ರೋಕರ್ ವಿರುದ್ಧ FIR ಕೂಡ ದಾಖಲಾಗಿತ್ತು. ಮಹಿಳೆಯೊಬ್ಬರ ಫೈಲ್ ಕ್ಲಿಯರ್ ಮಾಡಿಕೊಡುವುದಾಗಿ, 1.75 ಕೋಟಿ ಪಡೆದು ವಂಚಿಸಿದ್ದ. FIR ದಾಖಲಾಗ್ತಿದ್ದಂತೆ ACBಯ 10 DYSPಗಳು, 3 SPಗಳಿಂದ
ನಿನ್ನೆ ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿ 12 ಗಂಟೆವರೆಗೂ ACB ರೇಡ್ ಮಾಡಲಾಗಿದೆ.
ಕುಖ್ಯಾತ ಬ್ರೋಕರ್ ಹೆಸರು ಬಾಯ್ಬಿಟ್ಟಿರೋ ಹಲವು ಅಧಿಕಾರಿ, ಸಿಬ್ಬಂದಿ ಈತ ಹೇಳಿದಂತೆ BDA ಕೇಳುತ್ತಿತ್ತು, ಈತನ ಮನೆಗೆ ಅಧಿಕಾರಿಗಳು ಫೈಲ್ ತೆಗೆದುಕೊಂಡು ಹೋಗುತ್ತಿದ್ದರಂತೆ. ಒಂದು ಫೈಲಿಗೆ 50 ಲಕ್ಷದಿಂದ 5 ಕೋಟಿವರೆಗೂ ಕುಖ್ಯಾತ ಬ್ರೋಕರ್ ಹಣ ಪಡೆಯುತ್ತಿದ್ದ. ಈ ಹಣದಲ್ಲಿ ನಮಗೂ ಸ್ವಲ್ಪ ಪಾಲು ಕೊಡುತ್ತಿದ್ದ ಎಂದು ಕೆಲವು ಅಧಿಕಾರಿಗಳು ಬಾಯಿಬಿಟ್ಟಿದ್ದಾರೆ.
R.T.ನಗರ ಬ್ರೋಕರ್ಗಾಗಿ ACB ಟೀಂ ರಾತ್ರಿಯಿಡೀ ಹುಡುಕಾಟ ನಡೆಸಿದ್ದು, ಈತನ ಸಮಸ್ತ ಆಸ್ತಿ ಕಲೆ ಹಾಕಿ EDಗೆ ಮಾಹಿತಿ ಕೊಟ್ಟು ಜಪ್ತಿಗೂ ACB ತಯಾರಿ ಮಾಡುತ್ತಿದೆ. FIR ದಾಖಲಾಗುತ್ತಿದ್ದಂತೆ BDA ಬ್ರೋಕರ್ಗಳ ಮಟ್ಟಕ್ಕೆ ಸಿಎಂ ಬೊಮ್ಮಾಯಿ ಸೂಚಿಸಿದ್ದು, ಆರ್.ಟಿ.ನಗರ ಬ್ರೋಕರ್ ಹುಡುಕಿಕೊಂಡು ಮಂಗಳೂರು ಕಡೆಗೆ ವಿಶೇಷ ತಂಡ ತೆರಳಿದೆ.
ಇದನ್ನೂ ಓದಿ:ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಬೆಳಗಿದ ಕಾರ್ತಿಕ ದೀಪ…!