ಬೆಂಗಳೂರು: ಮೂವರು IASಗಳಿಗೆ ACB ಬಿಗ್ ಶಾಕ್ ಕೊಟ್ಟಿದ್ದು, RDPR ಅನುದಾನ ವಿಚಾರದಲ್ಲಿ ತನಿಖೆ ಸ್ಟಾರ್ಟ್ ಮಾಡಲಾಗಿದೆ. ವಿಶೇಷ ಕೋರ್ಟ್ ಆದೇಶದ ಮೇಲೆ ತನಿಖೆ ಶುರುವಾಗಿದೆ.
ACB ಮುಖ್ಯಸ್ಥರು DySP ನೇತೃತ್ವದ ತನಿಖಾ ಟೀಂ ನೇಮಿಸಿದ್ದು, ಸೆಕ್ಷನ್ 202 ಅಡಿಯಲ್ಲಿ ಪರಿಶೀಲನೆಗೆ ಎಸಿಬಿ ಮುಂದಾಗಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹಾಲಿ ACS ರಮಣ ರೆಡ್ಡಿ, ಮಾಜಿ IAS ಅಮಿತಾ ಪ್ರಸಾದ್ಗೆ ಸಂಕಷ್ಟ ಶುರುವಾಗಿದೆ. ACB ಪ್ರಕರಣದ ಮೂಲ ದಾಖಲೆ ಪರಿಶೀಲನೆ ಮಾಡುತ್ತಿದ್ದು, ದೂರುದಾರ ಎಸ್.ನಾರಾಯಣ ಸ್ವಾಮಿ, ಸಾಕ್ಷಿಗಳಿಗೆ ನೋಟಿಸ್ ನೀಡಲಾಗಿದೆ. ಸದ್ಯದಲ್ಲೇ ACB ನೋಟಿಸ್ ನೀಡಿ ಹೇಳಿಕೆ ಮತ್ತು ಸಾಕ್ಷಿ ಕಲೆಹಾಕಲಿದ್ದಾರೆ. ದೂರುದಾರ & ಸಾಕ್ಷಿಗಳು ಕೊಡುವ ಹೇಳಿಕೆಯ ಮೇಲೆ ತನಿಖೆ ನಡೆಯಲಿದ್ದು, ಆರೋಪ ಹೊತ್ತ IASಗಳು ಸೇರಿ 6 ಮಂದಿಗೂ ACB ನೋಟಿಸ್ ಕೊಡುತ್ತೆ. ಎಲ್ಲರ ಹೇಳಿಕೆ ಪಡೆದು ದಾಖಲೆ ಪರಿಶೀಲಿಸಿ ಕೋರ್ಟ್ಗೆ ರಿಪೋರ್ಟ್ ನೀಡಲಾಗುತ್ತದೆ. 270 ಕೋಟಿ ಹಣ ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬೆದರಿಸಿ 6 ಲಕ್ಷ ಸುಲಿಗೆ…! ಪಿಸ್ತೂಲ್ ತೋರಿಸಿದ್ದ ಮೂವರ ಗ್ಯಾಂಗ್ ಅರೆಸ್ಟ್..!