ಬೆಂಗಳೂರು: KMF ಪೂರೈಕೆದಾರರಾದ ಲಾರಿ ಮಾಲೀಕರು ಹಾಗೂ ಲಾರಿ ಚಾಲಕರ ಮುಷ್ಕರಕ್ಕೆ ಸಂಬಂಧಿಸಿಂತೆ ಕೆಎಂಎಫ್ ಹಾಲು ಪೂರೈಕೆದಾರರ ಸಂಘದ ಅಧ್ಯಕ್ಷ ಗೋವಿಂದಪ್ಪ ಪ್ರತಿಕ್ರಿಯಿಸಿ ಗುತ್ತಿಗೆ ಮುಗಿದ ಬಳಿಕ 10 % ಹೆಚ್ಚಿಗೆ ಪಾವತಿ ಮಾಡುತ್ತೆವೆ ಎಂದಿದ್ರು, ಅದನ್ನ ಕೇಳಿದ್ರೆ ನೆನ್ನೆ ನಮ್ಮ ಆಚೆ ಹಾಕಿದ್ದಾರೆಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಗೋವಿಂದಪ್ಪ ಮಾತನಾಡಿ, ಸದ್ಯ ನಗರದಲ್ಲಿ 800 ಕ್ಕೂ ಹೆಚ್ಚು ವಾಹನಗಳಿದ್ದು,ನೆನ್ನೆ ರಾತ್ರಿಯಿಂದ 200 ಕ್ಕೂ ಹೆಚ್ಚು ವಾಹನಗಳಿಂದ ಕೆಲಸ ಸ್ಥಗಿತ ಮಾಡಿದ್ದೇವೆ. ಗುತ್ತಿಗೆ ಮುಗಿದು ವರ್ಷವೇ ಕಳೆದರು ಇನ್ನೂ ಹಿಂಬಾಕಿ ಹಣ ನೀಡಿಲ್ಲ, ಗುತ್ತಿಗೆ ಮುಗಿದ ಬಳಿಕ 10 % ಹೆಚ್ಚಿಗೆ ಪಾವತಿ ಮಾಡುತ್ತೆವೆ ಎಂದಿದ್ದರು, ಅದನ್ನ ಕೇಳಿದ್ರೆ ನೆನ್ನೆ ನಮ್ಮ ಆಚೆ ಹಾಕಿದ್ದಾರೆ. ಇವತ್ತು ಪೋರ್ಟಲ್ ವಾಹನಗಳ ಮೂಲಕ ಹಾಲಿನ ಸಫ್ಲೈ ಮಾಡ್ತಿದ್ದಾರೆ. ಹಾಗಾಗಿ ನಾವು ನಮ್ಮ ಬೇಡಿಕೆ ಈಡೇರುವ ತನಕ ನಾವು ಗಾಡಿಗಳನ್ನ ಓಡಿಸಲ್ಲ ಎಂದರು.
ಇದನ್ನೂ ಓದಿ: ಕಟೀಲ್ ನಾಲಗೆಗೆ ಮೂಳೆಯಿಲ್ಲ, ಬಾಯಿಗೆ ಬಂದಂತೆ ಹೇಳ್ತಾರೆ… ಕೈ-ತೆನೆ ನಾಯಕರ ಸಭೆ ಕುರಿತ ಕಟೀಲ್ ಹೇಳಿಕೆಗೆ ಡಿಕೆಶಿ ಕಿಡಿ…