ವಿಶ್ವ ಸೀರೀಸ್ 2021 ಟಿ-20 ಟೂರ್ನಿಯಲ್ಲಿ ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ ಭಾರತ 10 ವಿಕೆಟ್ಗಳ ಭರ್ಜರಿ ಜಯಗಳಿಸಿದೆ. ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಲೆಜೆಂಡ್ಸ್ ತಂಡ ಗೆಲುವಿನ ನಗೆ ಬೀರಿದೆ.
ಕ್ರಿಕೆಟ್ಗೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿದ್ದರೂ ತಮ್ಮ ಬ್ಯಾಟಿಂಗ್ ಹೇಗೆ ಮಾಡುವುದು ಎಂದು ತೋರಿಸಿಕೊಟ್ಟಿದೆ.ಈ ಆರಂಭಿಕ ಜೋಡಿ 59 ಎಸೆತಗಳು ಬಾಕಿ ಇರುವಾಗಲೇ 110 ರನ್ ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಜಯ ತಂದುಕೊಟ್ಟಿದ್ದಾರೆ. ಅಭಿಮಾನಿಗಳಿಗೆ ತಮ್ಮ ಆಕರ್ಷಕ ಬ್ಯಾಟಿಂಗ್ನಿಂದ ಮತ್ತೆ ಸಂತಸ ಪಡಿಸಿದ್ದಾರೆ.
ರಾಯ್ ಪುರದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಹೆಸರಾದ ವೀರೇಂದ್ರ ಸೆಹ್ವಾಗ್ 35 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 85 ರನ್ ಗಳಿಸಿದೆ, ಸಚಿನ್ ತೆಂಡೂಲ್ಕರ್ 26 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 33 ರನ್ ಸಿಡಿಸಿದರು. ಇವರಿಬ್ಬರ ಭರ್ಜರಿ ಆಟದಿಂದ ಭಾರತ 10.1 ಓವರ್ ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೇ ಗೆಲುವು ಸಾಧಿಸಿದೆ.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಲೆಜೆಂಡ್ಸ್ ತಂಡ 19.4 ಓವರ್ಗಳಲ್ಲಿ 109 ರನ್ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪ್ರಜ್ಯಾನ್ ಓಜಾ, ವಿನಯ್ ಕುಮಾರ್, ಯುವರಾಜ್ ಸಿಂಗ್, ತಲಾ 2 ವಿಕೆಟ್ ಪಡೆದರು.