ಯಾದಗಿರಿ : ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವ ಹಿನ್ನೆಲೆ ಮಾಜಿ ಮಂತ್ರಿಗಳು ಹಾಗೂ ಬಿಜೆಪಿಯ ಹಿರಿಯ ಮುಖಂಡ ಎ ಬಿ ಮಾಲಕರೆಡ್ಡಿಯವರು ಯಾದಗಿರಿಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಮಂತ್ರಿ ಹಾಗೂ ಮಾಜಿ ಶಾಸಕರಾದ ಮಾಲಕರೆಡ್ಡಿಯವರು ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಲ್ಲಿ ಗುರುತಿಸಿಕೊಂಡಿದ್ದವರು. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಬೇಸತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಪ್ರಸ್ತುತ ಕೆ ಪಿ ಸಿ ಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ ಆಯ್ಕೆಯಾದ ದಿನಗಳಿಂದ ಡಾ. ಎ ಬಿ ಮಾಲಕರೆಡ್ಡಿಯವರು ಅಧ್ಯಕ್ಷರ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಮಾತು ಕೇಳಿ ಬರುತ್ತಿದೆ.
ಸದ್ಯ ಎ ಬಿ ಮಾಲಕರೆಡ್ಡಿ ಪುತ್ರಿ ಡಾ. ಅನುರಾಗ ರೆಡ್ಡಿ ಯಾದಗಿರಿ ಕ್ಷೇತ್ರಕ್ಕೆ ಕೈ ಟಿಕೇಟ್ ಗಾಗಿ ಕೆಪಿಸಿಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ಯಾದಗಿರಿ ಕ್ಷೇತ್ರಕ್ಕೆ ತಮ್ಮ ಪುತ್ರಿ ಅನುರಾಗ ರೆಡ್ಡಿಗೆ ಕೈ ಟಿಕೇಟ್ ನೀಡಿದ್ರೆ ಮುಂಬರುವ ದಿನಗಳಲ್ಲಿ ಮಾಲಕರೆಡ್ಡಿಯವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಸ್ವತ: ಮಾಲಕರೆಡ್ಡಿ ಸುಳಿವು ನೀಡಿದ್ದಾರೆ.
ಇದನ್ನೂ ಓದಿ : ದೇಗುಲದಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧ ವಿಚಾರ… ಚಿಕ್ಕಪೇಟೆ ಶಾಸಕ ಗರುಡಚಾರ್ ವಿರುದ್ಧ ಭಜರಂಗದಳ ಆಕ್ರೋಶ…