ಬೆಂಗಳೂರು : ಕರ್ನಾಟಕ ಎಲೆಕ್ಷನ್ ಬಗ್ಗೆ ಮೇಜರ್ ಡಿಸಿಷನ್ ಆಗುತ್ತಾ..?, ಸಿಎಂ ಬೊಮ್ಮಾಯಿಗೆ ದೆಹಲಿಯಿಂದ ತುರ್ತು ಬುಲಾವ್ ಬಂದಿದೆ. ಸಿಎಂ ಬೊಮ್ಮಾಯಿ ಇಂದು ರಾತ್ರಿಯೇ ದೆಹಲಿಗೆ ಹೋಗ್ತಿದ್ದಾರೆ.
ದಿಢೀರ್ ಅಂತಾ ದೆಹಲಿ ಸಿಎಂ ಕರೆಸಿಕೊಳ್ತಿರೋದ್ಯಾಕೆ ವರಿಷ್ಠರು..? ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಬುಲಾವ್ ಕೊಟ್ಟಿರೋದ್ಯಾಕೆ..? ವರಿಷ್ಠರು ರಾಜ್ಯ ರಾಜಕೀಯದ ಎಲ್ಲಾ ಮಾಹಿತಿಯನ್ನು ಸಂಗ್ರಹ ಮಾಡುತ್ತಾರ. ಸಿಎಂ ಬೊಮ್ಮಾಯಿ ಜನ ಸಂಕಲ್ಪ ಸಮಾವೇಶದ ಹೆಸರಲ್ಲಿ ರಾಜ್ಯ ಸುತ್ತಿದ್ದು, ಬಿಎಸ್ವೈ ಜೊತೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಂಚಾರ ಮಾಡಿದ್ದಾರೆ. ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೂ ಹಲವು ಕ್ಷೇತ್ರಗಳಲ್ಲಿ ಸಮಾವೇಶ ನಡೆಯಲಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಜತೆ ಎಲೆಕ್ಷನ್ ವಿಚಾರ ಚರ್ಚೆ ಆಗುತ್ತಾ..?
ಕರ್ನಾಟಕ ಎಲೆಕ್ಷನ್ ಬಗ್ಗೆ ಮೇಜರ್ ನಿರ್ಧಾರ ಆಗುತ್ತಾ..? ಯಾವ ಭಾಗದಲ್ಲಿ ಯಾವ ರೀತಿ ರಣತಂತ್ರ ಮಾಡಬೇಕು..?, ರಾಜ್ಯದ ಯಾವ ಭಾಗದಲ್ಲಿ ಏನ್ ಪರಿಸ್ಥಿತಿ ಇದೆ ಎನ್ನುವ ಮಾಹಿತಿ ಸಂಗ್ರಹ ಮಾಡುತ್ತಾರೆ. ವೋಟರ್ ಐಡಿ ಡೇಟಾ ವಿವಾದದ ಬಗ್ಗೆ ಮಾಹಿತಿ ಸಂಗ್ರಹ ಮಾಡ್ತಾರಾ..?, ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ವಿವಾದ ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲು ಏರಿದೆ. ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ಕಳವು ಆರೋಪವಾಗಿದ್ದು, ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಹೈಕಮಾಂಡ್ ಪಡೆಯಲಿದೆ.
ಇದನ್ನೂ ಓದಿ : ಅದಿತಿ ಪ್ರಭುದೇವ್ ಆರತಕ್ಷತೆಯ Exclusive ಫೋಟೋಸ್ ಇಲ್ಲಿದೆ ನೋಡಿ