ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ ಪಟ್ಟಣದಲ್ಲಿ ಪಂಚರತ್ನ ಯಾತ್ರೆ ಅದ್ದೂರಿಯಾಗಿ ನಡೀತು. ಮಾಜಿ ಸಿಎಂ H.D ಕುಮಾರಸ್ವಾಮಿ ಅವ್ರಿಗೆ ಜೆಡಿಎಸ್ ಕಾರ್ಯಕರ್ತರಿಂದ 25ಕ್ಕೂ ಹೆಚ್ಚು ಡೊಳ್ಳುಗಳಿಂದ ತಯಾರಿಸಿದ್ದ ಬೃಹತ್ ಹಾರ ಹಾಕಿ ಭವ್ಯವಾಗಿ ಸ್ವಾಗತಿಸಿದ್ದಾರೆ.
ಬೃಹತ್ ಗಾತ್ರದ ಡೊಳ್ಳಿನ ಹಾರ ಕಂಡು ಹೆಚ್ಡಿಕೆ ಫಿದಾ ಆಗಿದ್ದಾರೆ. ಇನ್ನು, ಲಿಂಗಸುಗೂರಿಗೆ ಬಂದ ಹೆಚ್ಡಿಕೆಗೆ ಡಿಫರೆಂಟ್ ಬೃಹತ್ ಹಾರ ಹಾಕಲಾಯ್ತು. ಖಡಕ್ ರೊಟ್ಟಿಯ ಬೃಹತ್ ಹಾರ ಹಾಕುವ ಮೂಲಕ ಹೆಚ್ಡಿಕೆಗೆ ಭರ್ಜರಿ ಸ್ವಾಗತ ಕೋರಿದ್ರು. ಲಿಂಗಸುಗೂರು ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ, ಶಂಸುಲ್ ಹಕ್ ಖಾನ್, ಶಾಸಕರಾದ ವೆಂಕಟರಾವ್ ನಾಡಗೌಡ, ಶರಣಗೌಡ ಕಂದಕೂರು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ : ಫ್ಲೈಓವರ್ ಮೇಲಿಂದ ಹಣ ಎರಚಿದ್ದ ಪ್ರಕರಣ… ಅರುಣ ಹಾಗೂ ಸ್ನೇಹಿತ ಸತೀಶ ರಿಲೀಸ್…