ನೆಲಮಂಗಲ: ಕ್ಷುಲ್ಲಕ ವಿಚಾರಕ್ಕೆ ನೆಲಮಂಗಲದಲ್ಲಿ ಮತ್ತೆ ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದೆ. ನೆಲಮಂಗಲದ ಸ್ನೇಹ ವೈನ್ಸ್ನಲ್ಲಿ ಚೇರ್ ವಿಚಾರಕ್ಕೆ ಇಬ್ಬರ ಮೇಲೆ 8 ಮಂದಿ ಗ್ಯಾಂಗ್ ಹಲ್ಲೆ ಮಾಡಲಾಗಿದೆ.
ಮಾರಕಾಸ್ತ್ರ ಸಮೇತ ಬಾರ್ಗೆ ಬಂದಿದ್ದ ಎಂಟು ಮಂದಿ ಗ್ಯಾಂಗ್ನಲ್ಲಿ ರೌಡಿ ಶೀಟರ್ ಕೂಡಾ ಭಾಗಿಯಾಗಿದ್ದ ಮಾಹಿತಿಯಿದೆ. ಜಗದೀಶ್, ಕೆಂಪೇಗೌಡ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ , ಮನೋಜ್ ಅಲಿಯಾಸ್ ಮನು, ಭರತ್ ಅಲಿಯಾಸ್ ಭರತಿ, ವೆಂಕಟೇಶ್ ಅಲಿಯಾಸ್ ಬಡ್ಡ, ಪ್ರಹ್ಲಾದ್ ರಾವ್ ಅಲಿಯಾಸ್ ಪಣ್ಣು ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ರೌಡಿ ಗ್ಯಾಂಗ್ನ ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ… ಶವಕ್ಕಾಗಿ ಶೋಧಕಾರ್ಯ..!