ಬೆಂಗಳೂರು: 8 ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಪರ ಕೆಲಸ ಮಾಡಿದೆ. 210 ಕೋಟಿ ಡೋಸ್ ಕೊರೋನಾ ಲಸಿಕೆ ನೀಡಿದ್ದೇವೆ, ಅನ್ನ ಯೋಜನೆ ತಂದು ಉಚಿತ ಅಕ್ಕಿ ನೀಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕೊಮ್ಮಘಟ್ಟದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ ಪ್ರತಿ 15 ದಿನಕ್ಕೆ ಒಂದು ಹೊಸ ಯೋಜನೆ ತರಲಾಗುತ್ತಿದೆ. ರಸ್ತೆ, ರೈಲು, ಮೆಟ್ರೋ ಸೇರಿ ಹಲವು ಯೋಜನೆ ಉದ್ಘಾಟಿಸಿದ್ದಾರೆ, ಬೆಂಗಳೂರು ಸಬ್ ಅರ್ಬನ್ ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ನೆಲಮಂಗಲ-ತುಮಕೂರು ಷಟ್ಪಥ ರಸ್ತೆಗೆ ಚಾಲನೆ ನೀಡಿದ್ದಾರೆಂದು ತಿಳಿಸಿದ್ಧಾರೆ.
ಇದನ್ನೂ ಓದಿ : ನಮೋಗಾಗಿ ವಿಶೇಷ ಮೈಸೂರು ಪೇಟ.. ! ಮೋದಿಯ ತಲೆಯ ಮೇಲೆ ಇಂದು ಮೀರ ಮೀರ ರಾರಾಜಿಸುವ ಆಕರ್ಷಕ ಪೇಟ..!