ಬೆಂಗಳೂರು: ನೋಡನೋಡುತ್ತಲೇ 777 ಚಾರ್ಲಿ ಸಿನಿಮಾ 4ನೇ ವಾರವೂ ಭರ್ಜರಿ ಪ್ರದರ್ಶನ ಕಾಣ್ತಿದೆ.. ಕೋಟಿ ಕೋಟಿ ಕೊಳ್ಳೆ ಹೊಡೆದು ಬಾಕ್ಸಾಫೀಸ್ ಶೇಕ್ ಮಾಡ್ತಿದೆ.. ಜೂನ್ 10ಕ್ಕೆ ರಿಲೀಸ್ ಆಗಿದ್ದ ಈ ಕಾಮಿಡಿ ಎಮೋಷನಲ್ ಡ್ರಾಮಾ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದಿತ್ತು.. ದೇಶ ವಿದೇಶಗಳಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿತ್ತು.. ಪ್ರಾಣಿ ಪ್ರಿಯರು ಸಿನಿಮಾ ನೋಡಿ ಕಣ್ಣೀರು ಸುರಿಸಿದ್ದಾರೆ.. ಸಿನಿಮಾ 4ನೇ ವಾರವೂ ಭರ್ಜರಿ ಪ್ರದರ್ಶನ ಕಾಣ್ತಿದೆ..
ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಿನಿಮಾ ನೋಡಿದ ಪ್ರತಿಯೊಬ್ಬರು ಧರ್ಮ ಮತ್ತು ಚಾರ್ಲಿಯ ಅನುಬಂಧಕ್ಕೆ ಮನಸೋತಿದ್ದರು.. ಅದ್ರಲ್ಲೂ ಚಾರ್ಲಿ ಪರ್ಫಾರ್ಮೆನ್ಸ್ ಸಿನಿರಸಿಕರಿಗೆ ಮೋಡಿ ಮಾಡಿತ್ತು.. ರಾತ್ರೋರಾತ್ರಿ ಸಿನಿಮಾದಲ್ಲಿ ನಟಿಸಿರೋ ಶ್ವಾನ ಚಾರ್ಲಿ ಸ್ಟಾರ್ ಪಟ್ಟಕ್ಕೆ ಏರಿಬಿಟ್ಟಿದೆ.. ಕಿರಣ್ ರಾಜ್ ಡೆಡಿಕೇಶನ್, ರಕ್ಷಿತ್ ಶೆಟ್ಟಿ ಎಫರ್ಟ್ ಎಲ್ಲವೂ ಸ್ಕ್ರೀನ್ ಮೇಲೆ ಎದ್ದು ಕಾಣ್ತಿದೆ.. ಎಲ್ಲಾ ವಿಭಾಗದಲ್ಲೂ ಫಸ್ಟ್ ಕ್ಲಾಸ್ ಅನ್ನಿಸಿಕೊಂಡ ಸಿನಿಮಾ ಸಿಲ್ವರ್ ಸ್ಕ್ರೀನ್ ಮೇಲೆ ಜಾದೂ ಮಾಡಿದೆ..
ದೇಶಾದ್ಯಂತ 450 ಸ್ಕ್ರೀನ್ಗಳಲ್ಲಿ ಸಿನಿಮಾ 25 ದಿನ ಪೂರೈಸಿದೆ.. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ತಂದಿದೆ.. ಇದೇ ರೀತಿ ಅಮೋಘವಾಗಿ 50ನೇ ದಿನ ಪೂರೈಸುತ್ತೆ ಅನ್ನೋ ನಿರೀಕ್ಷೆಯಲ್ಲಿದೆ ಚಿತ್ರತಂಡ.. ಇನ್ನು ಸಿನಿಮಾದ ಒಟ್ಟು ಬ್ಯುಸಿನೆಸ್, ಪ್ರೋಡ್ಯೂಸರ್ ಶೇರ್ ಎಷ್ಟು ಅನ್ನೋ ಮಾಹಿತಿಯನ್ನು ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದು, ಚಿತ್ರ ಎಲ್ಲಾ ಸೇರಿ 150 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ತಿಳಿಸಿದ್ಧಾರೆ.
777 ಚಾರ್ಲಿ ಚಿತ್ರದಿಂದ ಬಂದ ಲಾಭದಲ್ಲಿ ದೇಶಿ ನಾಯಿಗಳ ರಕ್ಷಣೆ ಸಹಾಯ ಮಾಡಲು ಮನಸ್ಸು ಮಾಡಿದ್ದಾರೆ.. ಲಾಭದ ಒಂದಷ್ಟು ಮೊತ್ತವನ್ನು ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ನೀಡಲು ತೀರ್ಮಾನಿಸಿದ್ದಾರೆ.. ಇನ್ನು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಲಾಭದಲ್ಲಿ ಶೇಕಡಾ 10ರಷ್ಟು ಹಣವನ್ನು ಹಂಚಲು ಮುಂದಾಗಿದ್ದಾರೆ.
ಕಾರ್ಯಕ್ರಮದಲ್ಲಿ ಫ್ರಾಕ್ ತೊಟ್ಟು ಮಿರಿ ಮಿರಿ ಮಿಂಚಿದ ಚಾರ್ಲಿ..!
ಇನ್ನು ಸಿನಿಮಾ 25 ಡೇಸ್ ಸೆಲೆಬ್ರೇಷನ್ ಕಾರ್ಯಕ್ರಮದಲ್ಲಿ ಚಾರ್ಲಿ ಫ್ರಾಕ್ ತೊಟ್ಟು ಓಡಾಡುತ್ತಿದ್ದಳು.. ಈಗ ಚಾರ್ಲಿ ಎಲ್ಲೆ ಹೋದ್ರು ಅಭಿಮಾನಿಗಳು ಮುತ್ತಿಕೊಳ್ತಾರೆ.. ಸೆಲ್ಫಿಗಾಗಿ ಮುಗಿಬೀಳ್ತಾರೆ.. ಸಿನಿಮಾ 50 ಡೇಸ್ ಕಂಪ್ಲೀಟ್ ಮಾಡಿದ ಮೇಲೆ ದೊಡ್ಡದಾಗಿ ಸೆಲೆಬ್ರೇಷನ್ಗೆ ಪ್ಲಾನ್ ಮಾಡಿದೆ ಚಿತ್ರತಂಡ.