ಬೆಂಗಳೂರು: ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಗಣರಾಜ್ಯೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜಪಥದಲ್ಲಿ ಪಥಸಂಚಲನ 30 ನಿಮಿಷಗಳ ಕಾಲ ತಡವಾಗಿ ಬೆಳಗ್ಗೆ 10.30ಕ್ಕೆ ಶುರುವಾಗಲಿದೆ.
ಈ ಬಾರಿ 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ. ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಸ್ತಬ್ದಚಿತ್ರ ಸೇರಿದಂತೆ 12 ರಾಜ್ಯಗಳು ಹಾಗೂ 9 ಸಚಿವಾಲಯದ 21 ಸ್ತಬ್ಧಚಿತ್ರ ಪರೇಡ್ನಲ್ಲಿ ಪ್ರದರ್ಶನಗೊಳ್ಳಲಿವೆ. ರೈಸಿನಾ ಹಿಲ್ಸ್ನಿಂದ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಪರೇಡ್ ಸಾಗಲಿದೆ. ಭಾರತೀಯ ಸೇನೆಯ ಹಳೆ ಮತ್ತು ಹೊಸ ಯುಗವನ್ನು ಯೋಧರು ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಪ್ರದರ್ಶಿಸಲಿದ್ದಾರೆ.
ಇದನ್ನೂ ಓದಿ:ಮಹೀಂದ್ರಾ ಶೋರೂಂ ಸಿಬ್ಬಂದಿಯಿಂದ ರೈತನಿಗೆ ಅವಮಾನ… ವಿಷಾದ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ…