ನವದೆಹಲಿ : 73ನೇ ಗಣರಾಜ್ಯೋತ್ಸವದ ಪಥ ಸಂಚಲನ ನಡೆದ ರಾಜಪಥ ಇಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯ್ತು.2003 ರಿಂದ ದೇಶದ ಪ್ರಥಮ ಪ್ರಜೆ ಸೇವೆಯಲ್ಲಿದ್ದ ಆ ಸೇವಕನಿಗೆ ಖುದ್ದು ರಾಷ್ಟ್ರಪತಿ ಮತ್ತು ಪ್ರಧಾನಿಯವರಿಂದ ಬೀಳ್ಕೊಡುಗೆ ಅಮೋಘವಾಗಿತ್ತು.
ವಿರಾಟ್ ಹೆಸರಿನ ಪ್ರೆಸಿಡೆಂಟ್ ಬಾಡಿಗಾರ್ಡ್ ಪಡೆಯ ಕುದುರೆಗೆ ಇಂದು ಬೀಳ್ಕೊಡುಗೆ ಕೊಡಲಾಯಿತು. 2003ರಲ್ಲಿ ರಾಷ್ಟ್ರಪತಿ ಭವನದ ಪ್ರೆಸಿಡೆಂಟ್ ಅಂಗ ರಕ್ಷಕ ದಳದ ಅಶ್ವ ಪಡೆಯಲ್ಲಿ ವಿರಾಟ್ ಹೆಸರಿನ ಕುದುರೆ ಸೇರಿತ್ತು. 19 ವರ್ಷಗಳ ಕಾಲ ರಾಷ್ಟ್ರಪತಿಗಳ ಸೇವೆಯಲ್ಲಿ ವಿರಾಟ್ ಕುದುರೆ ತೊಡಗಿ , ಸುಮಾರು 13 ವರ್ಷ ಪಥ ಸಂಚಲನದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ಪ್ರತಿ ವರ್ಷ ರಾಷ್ಟ್ರಪತಿಗಳು ರಾಜಪಥಕ್ಕೆ ಬರುವ ವೇಳೆ ಈ ಕುದುರೆ ಅಶ್ವದಳದ ಮುಂದಾಳತ್ವ ವಹಿಸುತ್ತಿತ್ತು. ಪ್ರೆಸಿಡೆಂಟ್ ಬಾಡಿಗಾರ್ಡ್ ಅಂತಲೇ ವಿರಾಟ್ ಕುದುರೆ ಹೆಸರು ಪಡೆದಿತ್ತು. ಜನವರಿ 15ರ ಸೇನಾ ದಿನದಂದು ವಿರಾಟ್ ಕುದುರೆಗೆ ಚೀಫ್ ಆರ್ಮಿ ಸ್ಟಾಫ್ ಕಮಾಂಡೇಶನ್ ಗೌರವವನ್ನೂ ನೀಡಲಾಗಿದೆ. ವಿಶಿಷ್ಟ ಸೇವೆಗಾಗಿ ಈ ಗೌರವ ಪಡೆದ ಅಶ್ವಾರೋಹಿ ದಳದ ಮೊದಲ ಕುದುರೆ ವಿರಾಟ್ ಆಗಿದೆ.
ಇಂದು ವಿರಾಟ್ ಕುದುರೆ ನಿವೃತ್ತಿ ಹೊಂದಿದ್ದು ,ಹೀಗಾಗಿ ರಾಜಪಥದಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿರಾಟ್ ಕುದುರೆ ಬಳಿಗೆ ಹೋಗಿ ತಲೆಸವಾರಿ ಬೀಳ್ಕೊಡುಗೆ ಕೊಡಲಾಯಿತು.
ಇದನ್ನೂ ಓದಿ : ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ…!