ಯಾದಗಿರಿ: ವರಮಹಾಲಕ್ಷ್ಮಿ ಹಬ್ಬದ ದಿನವೇ ಜವರಾಯನ ಅಟ್ಟಹಾಸ ಮೆರೆದಿದ್ದು, ಭೀಕರ ರಸ್ತೆ ಅಪಘಾತಕ್ಕೆ 6 ಮಂದಿ ದುರ್ಮರಣ ಹೊಂದಿದ್ದಾರೆ.
ಕಾರು ಹಾಗೂ ಟ್ಯಾಂಕರ್ ನಡುವೆ ಡೆಡ್ಲಿ ಆ್ಯಕ್ಸಿಡೆಂಟ್ ಆಗಿದ್ದು, ಯಾದಗಿರಿಯ ಗುರುಮಿಠಕಲ್ನಲ್ಲಿ ನಡೆದ ಘಟನೆ ಸಂಭವಿಸಿದೆ. ತೆಲಂಗಾಣದಿಂದ ವಾಪಸ್ ಆಗ್ತಿದ್ದ ವೇಳೆ ಘಟನೆ ನಡೆದಿದೆ. ಮೃತರು ರಾಯಚೂರಿನ ಲಿಂಗಸಗೂರು ಹಟ್ಟಿ ನಿವಾಸಿಗಳಾಗಿದ್ದಾರೆ. ಹೀನಾ, ಇಮ್ರಾನ್, ಮೊಹಮ್ಮದ್, ನೂರ್ ಜಹಾನ್ ಬೇಗಮ್,
ವಾಜೀದ ಹುಸೇನ್, ಉಮೇಜಾ ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಹುಸೇನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಬಿಬಿಎಂಪಿಯ 243 ವಾರ್ಡ್ಗಳಿಗೆ ಮೀಸಲಾತಿ ಪ್ರಕಟ..! ಭುಗಿಲೆದ್ದ ಮೀಸಲಾತಿ ಅಸಮಾಧಾನ..! ಬಿಜೆಪಿಯಿಂದಲೇ ಆಕ್ರೋಶ..!