ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ, ಈ ಹಿನ್ನೆಲೆ 6 ತಿಂಗಳ ಆಡಳಿತದ ಸಾಧನೆ, ಸಂಭ್ರಮಾಚರಣೆ ಮಾಡಲಾಗುತ್ತಿದೆ. ಸಾಧನೆ ಹೇಳುತ್ತಲೇ ಸಿಎಂ ಬೊಮ್ಮಾಯಿ ಹೊಸ ಸಂಕಲ್ಪ ಘೋಷಿಸಿದ್ದಾರೆ.
ರೈತರು, ಬಡವರು, ಮಹಿಳೆಯರ ಪ್ರಗತಿಗೆ ಸಿಎಂ ಸಂಕಲ್ಪ ಮಾಡಿದ್ದು, ಎಸ್ಸಿ-ಎಸ್ಟಿ, ಒಬಿಸಿ ಮಂಡಳಿಗಳ ಅಮೂಲಾಗ್ರ ಬದಲಾವಣೆ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಏಪ್ರಿಲ್ ವೇಳೆಗೆ ಬೃಹತ್ ಯೋಜನೆ ಜಾರಿ ತರಲಾಗುವುದು, ನಮ್ಮ ಸರ್ಕಾರ ಅಭಿವೃದ್ಧಿ ಯೋಜನೆಗೆ 24 ಸಾವಿರ ಕೋಟಿ ಕೊಟ್ಟಿದೆ. ಪ್ರತಿ ವರ್ಷ ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ ನೀಡಲಾಗಿದೆ. ನಮ್ಮದು ಫುಟ್ಬಾಲ್ ಟೀಂ, ಡಿಪೆನ್ಸ್ ಗೊತ್ತು, ಅಗ್ರೆಸೀವ್ ಗೊತ್ತು. ಮುಂದಿನ ದಿನಗಳಲ್ಲಿ ಸದೃಢ ಕರ್ನಾಟಕ ಕಟ್ಟಲು ಶ್ರಮಿಸುತ್ತೇವೆ. ಪ್ರಧಾನಿ ಮೋದಿ, ಬಿಎಸ್ ಯಡಿಯೂರಪ್ಪ, ಅಮಿತ್ ಶಾ ಮಾರ್ಗದರ್ಶನದಲ್ಲಿ ನಡೆಯುವೆ ಎಂದು ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಿಡ್ನೈಟ್ನಲ್ಲಿ ಪೊಲೀಸರಿಗೆ MLA ಅವಾಜ್… ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಆರೋಪ…