ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನಂತ್ರ ಸಿಎಂ ಹುದ್ದೆ ಅಲಂಕರಿಸಿದ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಆರು ತಿಂಗಳಲ್ಲೇ ಜನರ ಮನಗೆದ್ದಿದ್ದಾರೆ.
ಅಧಿಕಾರ ಸ್ವೀಕರಿಸಿದ ಮೊದಲ ಕೆಲ ದಿನಗಳಲ್ಲೇ ಸಿಎಂ ಎಂದರೆ ‘ಕಾಮನ್ ಮ್ಯಾನ್‌ಎನ್ನುವ ಮೂಲಕ ಮೆಚ್ಚುಗೆ ಗಳಿಸಿದ ಬೊಮ್ಮಾಯಿ, ತಮ್ಮ ಆಡಳಿತದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಬಸವಾಜ ಬೊಮ್ಮಾಯಿ ಸಿಎಂ ಆಗಿ ಇಂದಿಗೆ 6 ತಿಂಗಳು ಪೂರೈಸಿದ್ದಾರೆ. ಜತೆಗೆ ಇಂದು ಬೊಮ್ಮಾಯಿ ಅವರ 62ನೇ ಹುಟ್ಟುಹಬ್ಬ ಕೂಡ ಇದೆ. ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ರೂ ಸರ್ಕಾರದ ಆರು ತಿಂಗಳ ಸಾಧನೆಯ ಸಂಭ್ರಮವನ್ನು ಸರಳ ಕಾರ್ಯಕ್ರಮದ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಹಿಂದೂ ರಾಷ್ಟ್ರವಾದದ ಪರ ಒಲವು ಹೆಚ್ಚುತ್ತಿದೆ… ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಕಳವಳ…