ಮೈಸೂರು ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ, ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ಸದಸ್ಯತ್ವ ಸ್ಥಾನದಿಂದ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನ ಮುಂದಿನ ಆದೇಶದವರೆಗೆ ಅಮಾನತು ಮಾಡಿ ಶಾಕ್ ನೀಡಿದೆ.
ಮೈಸೂರು ನಗರ ಕಾಂಗ್ರೆಸ್‌ನಿಂದ ಎನ್.ಆರ್.ಕ್ಷೇತ್ರದಲ್ಲಿ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನ ಅಮಾನತು ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಸದಸ್ಯರಾಗಿದ್ದರೂ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದಾರೆ. ತನ್ವೀರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ,ಶಾಹಿದ್,ಎಂ.ಎನ್.ಲೋಕೆಶ್, ಅಬೀಬ್, ಅಣ್ಣು, ಅಣ್ಣು ಪುತ್ರ ಎಂದು ತಿಳಿದುಬಂದಿದೆ. ತನ್ವೀರ್ ಮನೆ ಮುಂದೆ ಸಿದ್ದು ವಿರುದ್ದ ಧಿಕ್ಕಾರ ಕೂಗಿದ್ದಾರೆ. ಈ ಹಿನ್ನೆಲೆ ಮೈಸೂರು ನಗರ ಅಧ್ಯಕ್ಷ ಆರ್.ಮೂರ್ತಿ 6 ಮಂದಿಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.