ಬೆಂಗಳೂರು: ಈ ಬಾರಿ ಅದ್ದೂರಿಯಾಗಿ ಕರಗ ಮಹೋತ್ಸವ ನಡೆಯುತ್ತೆ, ಬಿಬಿಎಂಪಿ ವತಿಯಿಂದ 50 ಲಕ್ಷ ಹಣ ಬಿಡುಗಡೆ ಮಾಡಿದ್ದೇವೆ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಹಸಿಕರಗ , ಹೂವಿನ ಕರಗ, ಶಕ್ತೋತ್ಸವ ಸೇರಿ ಎಲ್ಲಾ ಉತ್ಸವ ನಡೆಯುತೆ,ಕರಗ ಉತ್ಸವ ಸಾಗುವ ಮಾರ್ಗದಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಿದ್ದೇವೆ.
ವಾಹನ ನಿಲುಗಡೆಗೂ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೇವೆ, ಪೊಲೀಸರು ಸೂಕ್ತ ಬಂದೋಬಸ್ತ್ ನೀಡಲು ಸಿದ್ಧವಾಗಿದ್ದಾರೆ.
ಎಂದಿನಂತೆ ಬೆಂಗಳೂರು ಕರಗ ಉತ್ಸವ ಸಡಗರ, ಸಂಭ್ರಮದಿಂದ ನಡೆಯುತ್ತೆ ಎಂದು
ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ:ಕರಗ ದರ್ಗಾಗೆ ಹೋಗುವುದು ಗ್ಯಾರೆಂಟಿ ಯಾರು ತಪ್ಪಿಸಲು ಆಗುವುದಿಲ್ಲ ಡಿಸಿಪಿ ಅನುಚೇತ್ ಘೋಷಣೆ..!