ದಾವಣಗೆರೆ : 40 % ಕಮಿಷನ್ ದಂಧೆಗೆ ಹಸಿ ಹಸಿ ಎಕ್ಸಾಂಪಲ್ ಇದಾಗಿದ್ದು, ಡಾಂಬರ್ ರಸ್ತೆ ರೊಟ್ಟಿಯಂತೆ ಕಿತ್ತು ಬರುತ್ತಿದೆ. 1 ಕೋಟಿ 80 ಲಕ್ಷ ವೆಚ್ಚದ ರಸ್ತೆ ಕಾಮಗಾರಿ 15 ದಿನಕ್ಕೆ ಕಿತ್ತು ಹೋಗಿದೆ.
ದಾವಣಗೆರೆಯ ಜಗಳೂರು ತಾಲೂಕಿನ ಯರಲಕಟ್ಟಿಯಲ್ಲಿ ರಸ್ತೆ ಕಾಮಗಾರಿ ಕಳಪೆಯಾಗಿದೆ. ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಕ್ಷೇತ್ರದಲ್ಲಿ ಕಾಮಗಾರಿ ಮಾಡಲಾಗಿದೆ. 3 ಕಿ.ಮೀ ರಸ್ತೆಗೆ 1 ಕೋಟಿ 80 ಲಕ್ಷ ಬಿಡುಗಡೆಯಾಗಿತ್ತು. ಚಂದ್ರಪ್ಪ ಮರಿಕುಂಟೆ ಎನ್ನುವ ಗುತ್ತಿಗೆದಾರರಿಂದ ಕಾಮಗಾರಿ ಮಾಡಲಾಗಿತ್ತು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಯರಲಗಟ್ಟೆ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ಧಾರೆ. ಬಿಲ್ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಭಾರೀ ಒತ್ತಾಯ ಮಾಡಿದ್ಧಾರೆ. ಕಾಂಟ್ರಾಕ್ಟರ್ನನ್ನು ಅರೆಸ್ಟ್ ಮಾಡಿ ಬ್ಲಾಕ್ಲಿಸ್ಟ್ಗೆ ಸೇರಿಸಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕಿರುತೆರೆ, ಬೆಳ್ಳಿ ತೆರೆಯಲ್ಲಿ ಮಿಂಚಿದ್ದ ಹಿರಿಯ ನಟ ಬಾಲಾಜಿ ನಿಧನ…