ಬೆಂಗಳೂರು : 40% ಕಮಿಷನ್ ಕರ್ಮಕಾಂಡಕ್ಕೆ ಮತ್ತೊಂದು ಸಾಕ್ಷಿ ಇದಾಗಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೆಗಾ ಮೆಗಾ ಸ್ಕ್ಯಾಮ್ ನಡೆದಿದೆ. ಚಿಕ್ಕಪೇಟೆಯಲ್ಲಿ ನಡೀತಾ 800 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದ್ಯಾ, ಕೋಟಿ ಕೋಟಿ ಅನುದಾನ ನುಂಗಿ ನೀರು ಕುಡಿದದ್ದು ಯಾರು, ಚಿಕ್ಕಪೇಟೆ ಕ್ಷೇತ್ರದ ಅಭಿವೃದ್ಧಿಗಾಗಿ ಬಂದ ಹಣ ಎಲ್ಲಿ ಹೋಯ್ತು , ಶಾಸಕ ಉದಯ್ ಗರುಡಾಚಾರ್ ಅವ್ರೇ ನಿಮ್ಮ ಕ್ಷೇತ್ರದಲ್ಲಿ ಏನಾಗ್ತಿದೆ..?
ಚಿಕ್ಕಪೇಟೆ ಕ್ಷೇತ್ರಕ್ಕೆ 800 ಕೋಟಿ ಅಭಿವೃದ್ಧಿ ಅನುದಾನ ಬಂದಿದೆ. ಆದ್ರೆ, ಕ್ಷೇತ್ರದಲ್ಲಿ ರಸ್ತೆ ಸರಿ ಇಲ್ಲ, ಸ್ಟ್ರೀಟ್ ಲೈಟ್ ಇಲ್ಲ . ಚಿಕ್ಕಪೇಟೆಯಲ್ಲಿ ಬಸ್ ಸ್ಟಾಪ್ ಇಲ್ಲ, ಒಳಚರಂಡಿ ಸರಿ ಇಲ್ಲ. ಜನ್ರಿಗೆ ಅನಾರೋಗ್ಯವಾದ್ರೆ ಕ್ಷೇತ್ರದಲ್ಲಿ ಸರಿಯಾದ ಆಸ್ಪತ್ರೆ ಇಲ್ಲ. 4 ವರ್ಷದಲ್ಲಿ ಪ್ರತಿ ವರ್ಷ 150-200 ಕೋಟಿ ಅನುದಾನ ಬಂದಿದೆ. 800 ಕೋಟಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಎಲ್ಲಿಗೆ ಹೋಯ್ತು, 800 ಕೋಟಿ ಹಣ ನುಂಗಿದ ಅಧಿಕಾರಿಗಳು ಯಾರ್ಯಾರು..?
ಆಮ್ ಆದ್ಮಿ ಪಾರ್ಟಿಯವರು ಶಾಸಕ ಉದಯ ಗರುಡಾಚಾರ್ಗೆ ಚಿಕ್ಕಪೇಟೆ ಹಗರಣದ ಬಗ್ಗೆ ಲೆಕ್ಕ ಕೇಳಿದ್ದು, AAP ನಾಯಕರು ಅನುದಾನ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ಧಾರೆ. ಗುಂಡಿ ಬಿದ್ದ ರಸ್ತೆ, ಚರಂಡಿ, ಅವ್ಯವಸ್ಥೆ ತೋರಿಸಿ ಲೆಕ್ಕದ ಪ್ರಶ್ನೆ ಮಾಡಿದ್ಧಾರೆ. ಆಮ್ ಆದ್ಮಿ ನಾಯಕರಿಂದ ಶಾಸಕರಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದು, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಉತ್ತರ ಕೊಡಿ ಎಂದಿದ್ಧಾರೆ. ಚಿಕ್ಕಪೇಟೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರೋದಕ್ಕೆ ಇದು ಸಾಕ್ಷಿಯಾಗಿದೆ.
ಚಿಕ್ಕಪೇಟೆ ಕ್ಷೇತ್ರದ ಜನ ಚಿಕ್ಕಪೇಟೆಯಲ್ಲಿ ಮೂಲಸೌಕರ್ಯಗಳು ಇಲ್ವೇ ಇಲ್ಲ ಎಂದು ತೀವ್ರ ಆಕ್ರೋಶ ಹೊರಹಾಕುತ್ತಿದ್ಧಾರೆ. ಜನತೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗಿಲ್ಲ ಎನ್ನುತ್ತಿದ್ದು, ಕ್ಷೇತ್ರಕ್ಕೆ ಬಂದ 800 ಕೋಟಿ ಅನುದಾನ ಎಲ್ಲಿ ಹೋಯ್ತು? ಚಿಕ್ಕಪೇಟೆಯ 800 ಕೋಟಿ ಅನುದಾನ ನುಂಗಿದ ಅಧಿಕಾರಿಗಳ್ಯಾರು? 40% ಕಮಿಷನ್ ಹೊಡೆದು ಕೆಲಸ ಮಾಡದೇ ಇರೋ ಅಧಿಕಾರಿಗಳ್ಯಾರು? ಚಿಕ್ಕಪೇಟೆ ಹಗರಣದ ಬಗ್ಗೆ ತನಿಖೆಗೆ ಅದೇಶಿಸುತ್ತಾ ಸರ್ಕಾರ ಎಂಬುದನ್ನೂ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ… ದೊಡ್ಡೇಬಾಗಿಲು ಮೋಳೆ ಗ್ರಾಮದಲ್ಲಿ 4.360 ಕೆಜಿ ಗಾಂಜಾ ವಶ…