ಬೆಂಗಳೂರು: ವಿಧಾನಸಭೆಯಲ್ಲಿ 40% ಕಮಿಷನ್ ಚರ್ಚೆಗೆ ಸಿಗಲಿಲ್ಲ ಅವಕಾಶ, ಕಾಂಗ್ರೆಸ್ ಕೋಲಾಹಲ ಮಧ್ಯೆ ಸದನ ಕಲಾಪ ಮುಂದೂಡಿಕೆ.
ಅನಿರ್ಧಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿಕೆ ಮಾಡಲಾಗಿದ್ದು, ಕಲಾಪ ಅರ್ಧಕ್ಕೇ ಮೊಟಕುಗೊಂಡಿದೆ.
ಗದ್ದಲ, ಕೋಲಾಹಲದಲ್ಲೇ ಕೊನೆಯ ಅರ್ಧ ದಿನ ಕಳೆದು ಹೋಗಿದೆ. ಕಲಾಪ ಆರಂಭದಲ್ಲಿ BMS ಟ್ರಸ್ಟ್ ತನಿಖೆಗೆ ಜೆಡಿಎಸ್ ಪಟ್ಟು ಹಿಡಿದಿದ್ದು, ಧರಣಿ ನಿರತ ಜೆಡಿಎಸ್ ಮನವೊಲಿಕೆಗೆ ಸ್ಪೀಕರ್ ಸಂಧಾನ ನಡೆಸಿದ್ದರು. ಸ್ಪೀಕರ್ ಸಂಧಾನ ನಡುವೆಯೂ ಜೆಡಿಎಸ್ ಹೋರಾಟ ಮುಂದುವರೆಸಿದೆ. 40 % ಕಮಿಷನ್ ವಿಚಾರ ಚರ್ಚೆಗೆ ಅವಕಾಶ ನೀಡಲು ಸಿದ್ದರಾಮಯ್ಯ ಪಟ್ಟು ಹಿಡಿದರು, ಸ್ಪೀಕರ್ ಅವಕಾಶ ನೀಡದೇ ಇದ್ದಾಗ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡೆಸಿದ್ದಾರೆ.
ಗದ್ದಲ, ಕೋಲಾಹಲ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆ ಮಾಡಲಾಗಿದೆ.
ಇದನ್ನೂ ಓದಿ:ನಿನ್ನೆ ಬೆಂಗಳೂರಿನಲ್ಲಿ NIA ರೇಡ್..! KG ಹಳ್ಳಿ ಪೊಲೀಸರಿಂದಲೂ PFI ವಿರುದ್ಧ ಕೇಸ್ ದಾಖಲು..!