ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಆರೋಗ್ಯ ಕವಚ ಯೋಜನೆಯಲ್ಲಿ ನೂರಾರು ಕೋಟಿ ಗೋಲ್ ಮಾಲ್ ಮಾಡಲಾಗಿದೆ. 300 ಕೋಟಿ ಗೋಲ್ ಮಾಲ್ ನಲ್ಲಿ IAS ಅಧಿಕಾರಿಗೆ ಸಂಕಷ್ಟ ಎದುರಾಗಿದೆ. IAS ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ದ ತನಿಖೆಗೆ ಅನುಮತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ್ದ ದೂರು, 2008-2018 ವರೆಗು ಬಡವರಿಗೆ ಉಚಿತ ಆಬ್ಯೂಲೇನ್ಸ್ ವ್ಯವಸ್ಥೆ ನೀಡಲು ಸರ್ಕಾರ ಟೆಂಡರ್ ನೀಡಿತ್ತು, ಆರೋಗ್ಯ ಕವಚ ಯೋಜನೆಯಲ್ಲಿ ಆ್ಯಬ್ಯೂಲೇನ್ಸ್ ನೀಡಲು GVK ಕಂಪನಿಗೆ ಟೆಂಡರ್ ನೀಡಲಾಗಿತ್ತು. 2018 ರಲ್ಲಿ ಟೆಂಡರ್ ಅವಧಿ ಮುಗಿದಿದ್ರು GVK ಕಂಪನಿಗೆ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಕವಚ ಯೋಜನೆಯಲ್ಲಿ GVK ಕಂಪನಿಗೆ ನೂರಾರು ಕೋಟಿ ಹಣ ನೀಡಿ ಗೋಲ್ ಮಾಲ್ ಮಾಡಲಾಗಿದೆ. ಟೆಂಡರ್ ನಿಯಮ ಉಲ್ಲಂಘನೆ ಮಾಡಿ ನೂರಾರು ಕೋಟಿ ಹಣ ನೀಡಿರೋ ಆರೋಪ ಹಾಗೂ ಆರೋಗ್ಯ ಇಲಾಖೆ ಕಮೀಷನರ್ ಆಗಿದ್ದ ಪಂಕಜ್ ಕುಮಾರ್ ಪಾಂಡೆ ವಿರುದ್ದ ಹಗರಣದ ಆರೋಪದ ಮೇಲೆ ಕಳೆದ ವರ್ಷ ಎಸಿಬಿಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರು.
ಪ್ರಾರ್ಥಮಿಕ ತನಿಖೆ ನಡೆಸಿದ್ದ ಎಸಿಬಿಗೆ ಹಗರಣ ನಡೆದಿರೋದು ಕಂಡು ಬಂದಿತ್ತು, ಪಂಕಜ್ ಕುಮಾರ್ ಪಾಂಡೆ ಅವ್ಯವಾರ ಮಾಡಿ ಹಣ ಬಿಡುಗಡೆ ಮಾಡಿದ್ದು ಕಂಡು ಬಂದಿತ್ತು, ಈ ಸಂಬಂಧ 17(A) ನಲ್ಲಿ ತನಿಖೆ ನಡೆಸಲು ಅನುಮತಿ ಕೋರಿದ್ದ ಎಸಿಬಿ, ಅನುಮತಿ ಕೋರಿ ಒಂದು ವರ್ಷವಾದ್ರು ಸರ್ಕಾರ ಪರ್ಮಿಷನ್ ನೀಡಿಲ್ಲ. ನಂತ್ರ ಸರ್ಕಾರದ ಬೇಜಾವ್ದಾರಿ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದ ದಿನೇಶ್ ಕಲ್ಲಹಳ್ಳಿ, ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ಅನಮತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿದೆ.