ನವದೆಹಲಿ: ಅಗ್ನಿಪಥ್ ಯೋಜನೆಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲು 10 ಸಾವಿರ ಮಹಿಳಾ ಅಭ್ಯರ್ಥಿಗಳು ನೋಂದಣೆ ಮಾಡಿಕೊಮಡಿದ್ದಾರೆ.
ಭಾರತೀಯ ನೌಕಾಪಡೆ 2022 ರಲ್ಲಿ 3000 ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಅಭ್ಯರ್ಥಿಗಳು ನೋಂದಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಭಾನುವಾರದವರೆಗೂ 10 ಸಾವಿರ ಮಹಿಳಾ ಅಭ್ಯರ್ಥಿಗಳು ನೋಂದಣೆ ಮಾಡಿಕೊಂಡಿದ್ದಾರೆ. 3000 ಅಗ್ನಿವೀರರ ಪೈಕಿ ಎಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಜುಲೈ 15 ರಿಂದ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಇದನ್ನೂ ಓದಿ: ಅಮೃತ್ ಪೌಲ್ ಬಂಧನದಿಂದ ಸರ್ಕಾರಕ್ಕೆ ಮುಖಭಂಗ ಆಗಿಲ್ಲ… ಎಷ್ಟೇ ದೊಡ್ಡವರಿದ್ರೂ, ನಾವು ಕ್ರಮ ತಗೊಳ್ತೀವಿ: ಸಿಎಂ ಬೊಮ್ಮಾಯಿ…
ಸಶಸ್ತ್ರ ಪಡೆಗಳು 1990 ರಿಂದ ಮಹಿಳೆಯರ ಸೇರ್ಪಡೆಗೆ ಅವಕಾಶ ಕಲ್ಪಿಸಿವೆ. ಈ ಮೊದಲು ಮಹಿಳೆಯರನ್ನು ಆಫೀಸರ್ ರ್ಯಾಂಕ್ ನ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಬಳಿಕ ಹಲವು ಬದಲಾವಣೆಗಳ್ನು ತರಲಾಗಿದೆ. 2019-20 ನೇ ಸಾಲಿನ ಬಳಿಕ ಭಾರತೀಯ ಸೇನೆಯಲ್ಲಿ ಇತರೆ ರ್ಯಾಂಕ್ ಗಳಿಗೂ ಮಹಿಳೆಯರ ನೇಮಕಾತಿ ನಡೆಯುತ್ತಿದೆ.
ಈ ವರ್ಷ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಳು ಒಟ್ಟು 46 ಸಾವಿರ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಸೇನಾ ಪಡೆಗಳು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಲಕ್ಷಾಂತರ ಅಭ್ಯರ್ಥಿಗಳು ನೋಂದಣೆ ಮಾಡಿಕೊಂಡಿದ್ಧಾರೆ.