ಬೆಂಗಳೂರು: ಬೆಂಗಳೂರಿನಲ್ಲಿ 213ನೇ ಫಲಪುಷ್ಪ ಪ್ರದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದು, ಬಜೆಟ್ನಲ್ಲಿ ಹಸಿರು ಅಭಿವೃದ್ಧಿಗೆ 100 ಕೋಟಿ ಇಡುವುದಾಗಿ ಹೇಳಿದ್ದಾರೆ.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಫ್ಲವರ್ ಶೋಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಬಜೆಟ್ನಲ್ಲಿ ಹಸಿರು ಅಭಿವೃದ್ಧಿಗೆ 100 ಕೋಟಿ ಇಡ್ತೇನೆ. ಬೆಂಗಳೂರು ಹೊರ ವಲಯದಲ್ಲಿ ಬೃಹತ್ ಗಾರ್ಡನ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಉದ್ಘಾಟನೆ ವೇಳೆ ತೋಟಗಾರಿಕೆ ಸಚಿವ ಮುನಿರತ್ನ, ಲಾಲ್ ಬಾಗ್ ಜಂಟಿ ಆಯುಕ್ತ ಜಗದೀಶ್, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸಾಥ್ ನೀಡಿದ್ದು, ಇಂದಿನಿಂದ ಜನವರಿ 30ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಬೆಂಗಳೂರು ನಗರದ ಇತಿಹಾಸ ಸಾರುವ ಬೆಂಗಳೂರು ಥೀಮ್ ಹೆಸರಿನಡಿ ಫ್ಲವರ್ ಶೋ ಆಯೋಜಿಸಲಾಗಿದೆ. ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿ ಗೋಪುರ ಅನಾವರಣ ಮಾಡಿದ್ದು, ಪುಷ್ಪ ಪಿರಮಿಡ್ಗಳು ಕಂಗೊಳಿಸುತ್ತಿವೆ. ಬಗೆ-ಬಗೆಯ ಫಾರಿನ್ ಫ್ಲವರ್ಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ.