ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ಅವಾಂತರಗಳು ಸೃಷ್ಟಿಯಾಗಿದ್ದು, ರಾಜ್ಯದ ಜನರ ಮನೆಗಳು ಹಾನಿಗೊಳಗಾಗಿದೆ ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಪರಿಹಾರವಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಬೊಮ್ಮಾಯಿ, 500 ಕೋಟಿ ರಸ್ತೆದುರಸ್ತಿ ಅಭಿವೃದ್ಧಿಗೆ ಕೊಟ್ಟಿದ್ದೇವೆ, ಪೂರ್ಣ ಮನೆ ಹಾನಿಯಾದವರಿಗೆ ಒಂದು ಲಕ್ಷ ಬಿಡುಗಡೆಗೆ ಸೂಚಿಸಲಾಗಿದೆ. ಭಾಗಶಃ ಮನೆ ಹಾನಿಗೆ ಹಣ ಬಿಡುಗಡೆಗೆ ಈಗಾಗಲೇ ಆದೇಶಿಸಿಸಲಾಗಿದೆ. ಬೆಳೆ ಸಮೀಕ್ಷೆ ಇಂದಿನಿಂದ ಶೀಘ್ರವಾಗಿ ಆಗಬೇಕು. ಪರಿಹಾರ ಆ್ಯಪ್‌ನಲ್ಲಿ ಎಂಟ್ರಿಯಾಗಬೇಕು ಅದರಂತೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ಎಲೆಕ್ಷನ್ನಲ್ಲಿ ಬಿಜೆಪಿ ಜೊತೆ ಕೈಜೋಡಿಸುತ್ತಾ ಜೆಡಿಎಸ್..? ಜೆಡಿಎಸ್ ಬೆಂಬಲ ಕೋರಿದ ಮಾಜಿ ಸಿಎಂ ಯಡಿಯೂರಪ್ಪ…!