ಅಪರೇಷನ್ ಕಮಲದಲ್ಲಿ ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಇದೀಗ ಹಲ್ಲಿಲ್ಲದ ಹಾವಿನಂತಾಗಿದ್ದಾರೆ. ಆ ಕಾರಣಕ್ಕಾಗಿ ಬಿಜೆಪಿಯಲ್ಲೂ ಇದೀಗ ಬಂಡಾಯ ಸಾರಿದ್ದು ಬಿಜೆಪಿಯ ನಾಯಕರು ಮತ್ತು ಆರ್ ಎಸ್ ಎಸ್ ನಾಯಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಹೌದು, ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ್ರೂ ಅದರಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರೊಬ್ಬರು ಮಂತ್ರಿ ಆಗುತ್ತಿದ್ದರು.ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವಿಲ್ಲದೇ ಹಲ್ಲಿಲ್ಲದ ಹಾವಿನಂತೆ ಬುಸುಗುಡುತ್ತಿದೆ.
ಬಿಜೆಪಿಯ ಸರ್ಕಾರ ಬರಲು ಕಾರಣವಾಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಆದ್ರೆ, ಅಸಹನೀಯ ಪ್ರಕರಣವೊಂದು ಬೆಳಕಿಗೆ ಬಂದ ಹಿನ್ನೆಲೆ ರಮೇಶ ಜಾರಕಿಹೊಳಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.
ಆರೋಪ ಬಂದ ಬಳಿಕ ಸುಮ್ಮನಿರಬೇಕಾದ ರಮೇಶ್ ಜಾರಕಿಹೋಳಿ ಬಿಜೆಪಿಯಲ್ಲೂ ಬಂಡಾಯ, ಭಿನ್ನಮತ ಶುರು ಮಾಡಿದ್ದಾರೆ. ಒಂದು ವೇಳೆ ಬಿಜೆಪಿ ಪಕ್ಷ ಸಹೋದರನಿಗೆ ಟಿಕೆಟ್ ಕೊಡದಿದ್ರೆ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೀಳಿಸಿ ಗೆಲ್ಲಿಸಿಕೊಂಡು ಬರುವ ಇರಾದೆ ರಮೇಶ ಅವರದ್ದಾಗಿದೆ. ಸಧ್ಯ ಬಿಜೆಪಿಯಲ್ಲಿ ಲಖನ್ ಗೆ ಟಿಕೆಟ್ ಕೇಳಿದ್ದಾರೆ. ಆದ್ರೆ, ರಮೇಶ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಈವರೆಗೂ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯೂ ಆಗಿಲ್ಲ. ಆದ್ದರಿಂದ ಲಖನ್ ರನ್ನು ಬಿಜೆಪಿ ಅಭ್ಯರ್ಥಿ ಅಂತಾ ಘೋಷಣೆಯನ್ನು ಮಾಡಿಲ್ಲ.
ಆದ್ರೆ, ಲಖನ್ ಜಾರಕಿಹೊಳಿ ಅವರೇ ಅಭ್ಯರ್ಥಿ ಎಂಬಂತೆ ರಮೇಶ್ ಜಾರಕಿಹೊಳಿ ಹಾಗೂ ಮತ್ತೊಬ್ಬ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈಗಾಗಲೇ ಒಂದು ಹಂತದ ಪ್ರಚಾರ ಕಾರ್ಯವನ್ನು ಮುಗಿಸಿದ್ದಾರೆ. ಇತ್ತ ತಮ್ಮದು ಶಿಸ್ತಿನ ಪಕ್ಷ ಅಂತಾ ಹೇಳಿಕೊಳ್ಳುವ ಬಿಜೆಪಿ ಪಕ್ಷಕ್ಕೆ ಜಾರಕಿಹೊಳಿ ನಡೆ ಮುಜುಗರ ತಂದಿದೆ.
ರಮೇಶ್ ಜಾರಕಿಹೋಳಿ ನಡೆ ಬಿಜೆಪಿಯ ನಿಷ್ಟಾವಂತ ನಾಯಕರು ಮತ್ತು ಆರ್ ಎಸ್ ಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು ಶಿಸ್ತು ಕ್ರಮಕ್ಕೆ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.